Jagadguru Stuti

 

 

ಜಗದ್ಗುರು೦ ಶ್ರೀ ಶಾರದಾಬ್ರಹ್ಮ ಜಗದ್ಗುರು೦ ಶ್ರೀಲಕ್ಷ್ಮಿನಾರಾಯಣ ಜಗದ್ಗುರು೦ ದೇವೋ ಶ್ರೀಉಮಾಮಹೇಶ್ವರ
ಜಗದ್ಗುರು೦ ಸಾಕ್ಷಾತ್ ಪರಾಶಕ್ತಿ ಶ್ರೀಲಲಿತಾಂಬಾ ತಸ್ಮೈ ಶ್ರೀ ಜಗದ್ಗುರವೇ ನಮಃ

ಶ್ರೀಲಕ್ಷ್ಮಿ

ಶ್ರೀಲಕ್ಷ್ಮಿ

ಶ್ರೀಲಕ್ಷ್ಮಿ ಮಹಾಲಕ್ಷ್ಮಿ ಧನಲಕ್ಷ್ಮಿ ನಮೋಸ್ತುತೇ
ಜಯಲಕ್ಷ್ಮಿ ವಿಜಯಲಕ್ಷ್ಮಿ ಪ್ರಸನ್ನಲಕ್ಷ್ಮಿ ನಮೋಸ್ತುತೇ IIಶ್ರೀII

 

ಶ್ರೀಮಾತಾ ಜಗನ್ಮಾತಾ ಕೋಲಾಸುರ ನಾಶಿನಿ  
ವಾಣಿ ಕಲ್ಯಾಣಿ ಆದಿತ್ಯ ಜ್ಯೋತಿ ದರ್ಶಿನಿ

ಶಾಪ ತಾಪ ವಿಮೋಚಿನಿ ಚಂದ್ರ ಕಿರಣ ಶೋಭಿನಿ

ಇಂದುಶೀತಲ ವರ್ಷಿಣಿ ವಿಶ್ವಜನನಿ ವಿಲಾಸಿನಿ IIಶ್ರೀII
 

ಸರ್ವಮಂಗಳೇ ಧರ್ಮನಿಲಯೇ ಹರಿಪ್ರಿಯೆ ಭಕ್ತಾನುರಕ್ತೆ

ಈಶ್ವರಿ ಹರೀಶ್ವರಿ ಓಂಕಾರೇಶ್ವರಿ

ಮೋಕ್ಷದಾಯಿನಿ ಮೃತ್ಯುನಾಶಿನಿ ದಾರಿದ್ರ್ಯ ಧ್ವಂಸಿನಿ

ಯುಕ್ತಿ ಮುಕ್ತಿ ಸಾಕ್ಷಿಣಿ ಹಂಸಿಣಿ  ಸುಗಂಧಿನಿ IIಶ್ರೀII

ಜಗದ್ಗುರು ನಮನ

ಜಗದ್ಗುರು ನಮನ

 
ಗುರು ಸೃಷ್ಟಿಕರ್ತ ಗುರು ಸಂರಕ್ಷಕ
ಗುರು ಅಂತ್ಯ ಅನಂತ ಸಾಧಕ
ಶ್ರೀಗುರು ಸದ್ಗುರು ಜಗದ್ಗುರುವೇ IIಗುರುII
ವಿದ್ಯಾಸಾಗರ ಜ್ಞಾನ ಆಗರ
ಸುಜ್ಞಾನ ವಿಜ್ಞಾನ ಸಾಕಾರ
ಪರಮಶಿವ ವಿದ್ಯಾರಣ್ಯ ಆಕಾರ
ಭಾರತಿ ಸ್ವರೂಪ ಭಾರತಿ ತೀರ್ಥ
ನಮೋ ಸದಾ ಸ್ಮೃತಿ ಸ್ತುತಿ ಮತಿಂ
ಪ್ರಾತಃ, ಮಧ್ಯಾಹ್ನ, ಸಂಧ್ಯಾ ಸತತಂ
ಗುರುಚರಣಂ ನಮಾಮಿ ಸ್ಮರಾಮಿ IIಗುರುII
ಸನಾತನ ನೂತನ ನವನೂತನ
ಧರ್ಮ ನಿತ್ಯ ಕರ್ಮಣಾ ಸಾರ
ಶೋಧ ಭೋಧ ವಿಚಾರ ಆಚಾರ
ಸದ್ವಿಚಾರ ಕಲಿಯುಗಾನುಸಾರ
ನಮೋ ಸದಾ ಸ್ಮೃತಿ ಸ್ತುತಿ ಮತಿಂ
ತ್ರಿಕಾಲ ಸದಾಕಾಲ ಅನುಗಾಲ ಸ್ಮರಣಂ
ಗುರುಚರಣಂ ನಮಾಮಿ ಸ್ಮರಾಮಿ IIಗುರುII
ವೇದಾಂತ ಸಾರ ಭರತ ವರ್ಷಿಣಿ
ಭಾರತ ಮಾತಾ ಸದಾ ಹರ್ಷಿಣಿ
ಭಕ್ತ ಸಂವೇದನಾ ಆಕರ್ಷಣಂ
ಶೃಂಗೇರಿ ಜಗದ್ಗುರು ಶ್ರೀ ಸಂಕರ್ಷಣಂ
ನಮೋ ಸದಾ ಸ್ಮೃತಿ ಸ್ತುತಿ ಮತಿಂ
ಬಾಲ್ಯ ಯೌವನ ವೃದ್ಯಾಪ್ಯ ಶರಣಂ
ಗುರುಚರಣಂ ನಮಾಮಿ ಸ್ಮರಾಮಿ IIಗುರುII
ಶ್ರೀಋಷ್ಯಶೃಂಗ ತಪೋ ಅನುಗ್ರಿಹಿತ
ಶ್ರೀ ಶಂಕರಾಚಾರ್ಯ ಗುರು ವಂದಿತ
ಶ್ರೀಮಾತಾ ಜಗದ್ಗುರು ಮಹಿಮಾನ್ವಿತ
ಶ್ರೀಶೃಂಗೇರಿ ಶ್ರೀ ಶಾರದಾ ಶ್ರೀನಿವಾಸಿತ
ನಮೋ ಸದಾ ಸ್ಮೃತಿ ಸ್ತುತಿ ಮತಿಂ
ಸರ್ವಕಾಲ ಚಿರಕಾಲ ಮಹಾಕಾಲ
ಗುರುಚರಣಂ ನಮಾಮಿ ಸ್ಮರಾಮಿ IIಗುರುII
Prof. Dr. Nagabhushan Moolky, Chicago, USA